ಸಮಸ್ತ ವಿಶ್ವಕ್ಕೂ ಆಧಾರವಾಗಿರುವ, ಕೊನೆಯಿಲ್ಲದ ಈ ಶೂನ್ಯವೇ ಶಿವ.
"ಶಿವ"
ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ. ಶಿವ ಎನ್ನುವ ಶಬ್ದದ ಅಕ್ಷರಶಃ ಅರ್ಥವು ಯಾವುದು ಅಲ್ಲವೋ ಅದು ಎಂದು. ಇಂದು ಆಧುನಿಕ ವಿಜ್ಞಾನವೂ ಕೂಡ ಹೇಳುವುದೇನೆಂದರೆ, ವಿಶ್ವವು ಶೂನ್ಯದಿಂದ ಉತ್ಪತ್ತಿಯಾಗಿದೆ, ಮತ್ತು ಶೂನ್ಯಕ್ಕೇ ಹಿಂದಿರುಗುತ್ತದೆ. ಈ ಮೇರೆಯಿಲ್ಲದ ಶೂನ್ಯವೇ ಸಮಸ್ತ ವಿಶ್ವದ ಅಸ್ತಿತ್ವಕ್ಕೆ ಮೂಲವಾಗಿ, ವಿಶ್ವದ ಮುಖ್ಯವಾದ ಗುಣವೇ ಆಗಿದೆ. ಎಲ್ಲ ಗ್ಯಾಲಕ್ಸಿಗಳನ್ನು ಒಟ್ಟು ಸೇರಿಸಿದರೂ ಅವುಗಳು ಈ ಶೂನ್ಯದ ಒಂದು ಸ್ವಲ್ಪ ಭಾಗವನ್ನು ಮಾತ್ರವೇ ಆವರಿಸಿಕೊಂಡಿವೆ. ಉಳಿದದ್ದೆಲ್ಲ ಈ ಅಪಾರವಾದ, ಕೊನೆಯಿಲ್ಲದ ಶೂನ್ಯವೇ ಆಗಿದೆ. ಹೀಗೆ, ಸಮಸ್ತ ವಿಶ್ವಕ್ಕೂ ಆಧಾರವಾಗಿರುವ, ಕೊನೆಯಿಲ್ಲದ ಈ ಶೂನ್ಯವೇ ಶಿವ. ಯಾವುದರಿಂದ ವಿಶ್ವದ ಉತ್ಪತ್ತಿಯಾಗಿದೆಯೋ ಯಾವುದರಲ್ಲಿ ವಿಶ್ವವು ಲಯವಾಗುವುದೋ ಅದಕ್ಕೆ ಶಿವ ಎಂದು ಹೇಳುತ್ತಾರೆ. ಹೀಗಾಗಿ, ಶಿವ ಎನ್ನುವುದು, ಎಲ್ಲ ಲಕ್ಷ ಣಗಳಿಗೂ ಅತೀತವಾದ ಒಂದು ತತ್ವವೇ ಹೊರತು ಒಂದು (ಮಾನುಷ ಅಥವಾ ಅತಿಮಾನುಷ) ಜೀವವಲ್ಲ. (ಈ ಅರ್ಥವನ್ನು ಯಾವ ವ್ಯಾಖ್ಯಾನಕಾರರೂ ಹೇಳಿದಂತೆ ತೋರುವುದಿಲ್ಲ.)
- ಶಿವ ತತ್ತ್ ಎಂದರೇನು- ಒಂದು ಚಿಂತನೆ:
- ಆ ಶಿವತತ್ವ ನಮ್ಮನ್ನು ನಿಲ್ಲಿಸುವುದು ಮಹಲಿನಲ್ಲಲ್ಲ ಗುಡಿಯಲ್ಲಲ್ಲ; ಬದಲು ರುದ್ರಭೂಮಿಯಲ್ಲಿ/ ಸ್ಮಶಾನದಲ್ಲಿ. ಮನೆ–ಮಹಲು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿ ಒಂದು. ಆದರೆ, ಬದುಕು ಕೊನೆಗೊಳ್ಳುವುದು ಬಯಲಾದ ರುದ್ರಭೂಮಿಯಲ್ಲಿ. ಶಿವನನ್ನು ‘ಬಯಲಾದ ರೂಪದವನು’ ಎನ್ನುತ್ತದೆ ಕನ್ನಡ ಜಾನಪದ(?). ಮನುಷ್ಯನ ಅಂತಿಮ ಗುರಿ ಶಿವನ ನೆಲೆ. ಅವನನ್ನು ಮಸಣದ ವಾಸಿಯೆನ್ನಲಾಗಿದೆ. ಅಲ್ಲಿನ ಭೂತಗಣವನ್ನು ಅವನ ಸಹಚರಿಗಳು ಎಂದೆವು. ಅವನ ದೇಹಕ್ಕೆ ಬೂದಿಯನ್ನು ಲೇಪಿಸಿದೆವು. ಅನ್ನಪೂರ್ಣೆಯ ಪತಿಯನ್ನು ಮಹಾಭಿಕ್ಷುಕನನ್ನು ಮಾಡಿ, ಭಿಕ್ಷಾಪಾತ್ರೆಯ ರೂಪದಲ್ಲಿ ಕೈಗೆ ಮಾನವನ ತಲೆ ಬುರುಡೆಯ ಕಪಾಲ ನೀಡಿದೆವು. ಈ ರುದ್ರಭೂಮಿ, ಬೂದಿ, ಕಪಾಲ– ಇವೆಲ್ಲವನ್ನೂ ದೈವದ ಭಾಗವಾಗಿಸುವ ಮೂಲಕ ಸಾವಿನ ಘನತೆಯನ್ನು ಹೆಚ್ಚಿಸಲಾಯಿತೇ? ಬಹುಶಃ, ಸಾವಿನ ಕುರಿತ ಹಿಂಜರಿಕೆ–ಭಯಗಳನ್ನು ಸಹಿಸಿಕೊಳ್ಳುವುದಕ್ಕಾಗಿ ಶಿವನನ್ನು ರೂಪಿಸಿದೆವು; ಆತನನ್ನು ಮೃತ್ಯುಂಜಯ ಎಂದೆವು.- ಇತ್ಯಾದಿ;ಬಯಲಾದ ಬಹುರೂಪಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ